Sunday, July 29, 2007

ಹಣತೆ

G.S. ಶಿವರುದ್ರಪ್ಪನವರ ಒಂದು ಕವಿತೆ...ನನಗೆ ಬಹಳ ಹಿಡಿಸಿದ್ದು

ಹಣತೆ ಹಚ್ಚುತ್ತೇನೆ ನಾನೂ
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ...

ಹಣತೆ ಹಚ್ಚುತ್ತೇನೆ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು ನನ್ನ ಮುಖ ನೀನು
ನಿನ್ನ ಮುಖ ನಾನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ

3 comments:

Unknown said...

nimma manassu susampannavagide....nima ella subhavanegalannu horatanni...

ತೇಜಸ್ವಿನಿ ಹೆಗಡೆ said...

ಶಿವರುದ್ರಪ್ಪನವರ "ಎಲ್ಲೋ ಹುಡುಕಿದೆ ಇಲ್ಲದ ದೇವರ.." ಕವನ ಓದಿರುವಿರಾ? ಇದು ತುಂಬಾ ಅರ್ಥವತ್ತಾದ ಸುಂದರ ಕವನಗಳಲ್ಲೊಂದು.

Unknown said...

jiddu, brame bittu belaka huduka horatavaru GSS.

nanna muka, ninna muka nodalu belaku beke emba prashnege uttara hudukta idara..........

thanks
intha kavana nanapisaddakkae nimage.
baredaddakka avarige.