ಕನ್ನಡ ಈಗಾಗಲೆ ರಾಜ್ಯದ ಆಡಳಿತ ಭಾಷೆಯೇ. ಹೊಸದಾಗಿ ಆಗಬೇಕಾದದ್ದೇನೂ ಇಲ್ಲ, ಆದರೆ ಅದರ ಆಡಳಿತಾತ್ಮಕ ಅನುಷ್ಠಾನದಲ್ಲಿ ನಾವು ಸಮರ್ಥರಾಗಿಲ್ಲ. ಇದಕ್ಕೆ ಕಾರಣ ಭಾಷೆಯ ದೌರ್ಬಲ್ಯವಲ್ಲ, ಅದನ್ನಾಡುವ ಜನರ ದೌರ್ಬಲ್ಯ..
ಪ್ರಖರವಾಗಿ ಕನ್ನಡ ಬಳಕೆ ಮಾಡಲು ಇಚ್ಚಾಶಕ್ತಿ ಬೇಕು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಹುಪಾಲು ದುರ್ಬಲ ವ್ಯಕ್ತಿತ್ವದ ಕನ್ನಡಿಗರಿಗೆ ಆತ್ಮವಿಶ್ವಾಸವಾಗಲಿ ಇಚ್ಚಶಕ್ತಿಯಾಗಲಿ ಬರಲು ಹೇಗೆ ತಾನೆ ಸಾಧ್ಯ? ಬಲವಿಲ್ಲದ ಛಲ ಮತ್ತು ಛಲವಿಲ್ಲದ ಬಲ ಎರಡು ಅಪ್ರಯೋಜನಕಾರಿ. ಅವು ಕುತ್ಸಿತತನವನ್ನೂ, ಮಾನಸಿಕ ದಾರಿದ್ರ್ಯವನ್ನೂ, ಪಲಾಯನವಾದವನ್ನೂ ಸೃಷ್ಠಿ ಮಾಡುತ್ತವೆ. ಇವುಗಳಿಂದ ಕನ್ನಡಿಗರು ಹೊರಬಂದಾಗ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪತ್ತು ಬೆಳೆಯುತ್ತದೆ, ಮತ್ತೆ ಇವೆಲ್ಲ ಅಪೇಕ್ಷಿಸುವುದು ಎದೆಗಾರಿಕೆಯನ್ನು, ಪ್ರಶ್ನಿಸುವ ಮನೋಭಾವವನ್ನು, ಸೂಕ್ಷ್ಮ ವ್ಯಕ್ತಿತ್ವವನ್ನು, ಸ್ವಾಭಿಮಾನವನ್ನು ಮತ್ತು ಎಲ್ಲೋ ಒಂದಿಷ್ಟು ಹಠಮಾರಿತನವನ್ನು.
ಕನ್ನಡಿಗರಿಗೆ ಈ ಗುಣಗಳು ಎಲ್ಲೋ ಕಳೆದು ಹೋದಂತಿವೆ, ಅವನ್ನು ನಾವು ತಿರುಗಿ ಹುಟ್ಟುಹಾಕಬೇಕೆಂದರೆ ನಾವು ಬಸವಣ್ಣನಲ್ಲಿಗೆ ಹೋಗಬೇಕು. ಛಲ ಬಲವನ್ನು ಉಂಬಳವಾಗಿ ಪಡೆದು ಕನ್ನಡಿಗರ ಬದುಕನ್ನು ಹಸನುಗೊಳಿಸಬೇಕು. ಹಸನುಗೊಂಡ ಬದುಕಿನಲ್ಲಿ ಕನ್ನಡ ಬೆಳೆಯುತ್ತದೆ, ಬಳುಕುತ್ತದೆ, ಜೀವ ಸಂಪತ್ತಿನಿಂದ ತುಂಬಿ ತುಳುಕಾಡುತ್ತದೆ. ಈ ದಿಕ್ಕಿನಲ್ಲಿ ಎಷ್ಟು ತಡವಾದರೂ ನಾವು ಹೆಜ್ಜೆಯಿಡಲೇಬೇಕು..
ಕೃಪೆ : ಪ್ರಜಾವಾಣಿ..
Subscribe to:
Post Comments (Atom)
7 comments:
ಭಾಷೆಯ ದೌರ್ಬಲ್ಯತೆ ನಮ್ಮ ಸಂಪ್ರದಾಯ ಆಗಿಬಿಟ್ಟಿದೆ.... ವಿಪರ್ಯಾಸ..
ಬಲವಿಲ್ಲದ ಛಲ ಮತ್ತು ಛಲವಿಲ್ಲದ ಬಲ ಎರಡು ಅಪ್ರಯೋಜನಕಾರಿ. -- ಸೂಪರ್ ಇದು!
ನಿನ್ನ collection ಚೆನ್ನಾಗಿದೆ! ಈ ನಿಟ್ಟಿನಲ್ಲಿ ನಿನ್ನದೇ ಬರಹ ಎದುರು ನೋಡುತ್ತಿದ್ದೇವೆ!
" ಕೃಪೆ : ರಶ್ಮಿ (ಪ್ರಜಾವಾಣಿ) " ಅಂತ ಬಂದಿದ್ರೆ ನಮ್ಮಷ್ಟು ಖುಷಿ ಯಾರೂ ಪಡಲ್ಲ!!!
ALL THE BEST!! Come up with your own writing... :-)
ಕನ್ನಡಿಗರಾಗಿ ಕನ್ನಡದ ಬಗ್ಗೆ ಪ್ರೀತಿ ಇಲ್ಲದ ಕನ್ನಡಿಗರನ್ನು ಕ೦ಡಾಗ ನ೦ಗೆ ಅಸಹ್ಯವೆನಿಸುತ್ತದೆ. ಯಾಕಿಷ್ಟು ಇ೦ಗ್ಲೀಷ್ ಮೋಹ?
Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Tênis e Sapato, I hope you enjoy. The address is http://tenis-e-sapato.blogspot.com. A hug.
Registration- Seminar on the occasion of kannadasaahithya.com 8th year Celebration
Dear Samarasa,
On the occasion of 8th year celebration of Kannada saahithya.
com we are arranging one day seminar at Christ college.
As seats are limited interested participants are requested to
register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
-kannadasaahithya.com balaga
kannadigara dourbalyavalla (manasa)madam. sarkarada dourbalya. naravillada sarkara? mooleyillada sarkara?kannadathana maretha sarkara? hana hana hennuva sarkara. sarkara dalli agne bandare yaaru thane thiraskarisuththare?aa dairya yarigide. adannu bittu kannadigara meleke ketta apavada. kannadigaru simhagalu. kenakuva thanaka namageke hendu summane hiruththre.thumba sahane hullavaru
kannadigaru.hella nammavare hendu maneyalli asraya kottu hunalu koduththare.adanna maretha annyaru
samaya nodi nammanne horagattu thare.agagide namma kannadada sthithi
nimmavaneada
siddesh
mysore
ಎಲ್ಲಾ ಭಾಷಿಗರ ಗೌರವಿಸುವವರೆಂದರೆ ಕನ್ನಡಿಗರು ಮಾತ್ರ...ಅದೇ ನಮ್ಮ ದೌರ್ಬಲ್ಯವಾದರೂ ಹೃದಯ ವಿಶಾಲತೆಯಲಿ ನಮಗೆ ಸರಿಸಾಟಿ ಯಾರಿಲ್ಲ. ರಾಜಕಾರಣಿಗಳ ಭಾಷೆ-ಕಡೆಗಣನೆ ಕೂಡ ಮತ್ತೊಂದು ದೌರ್ಬಲ್ಯವಾದರೂ ,ಅವರಿಗೆ ಅಧಿಕಾರ ಕೊಟ್ಟವರು ನಾವೇ ತಾನೇ ? ಅದರ ಹೊಣೆ ಹೊರಬೇಕಾದದ್ದು ಕೂಡ ನಾವೇ.
Post a Comment